For the best experience, open
https://m.justkannada.in
on your mobile browser.

ಗೃಹಲಕ್ಷ್ಮಿ ಯೋಜನೆ ಹಣದಲ್ಲಿ ಪತಿಗೆ ಕಣ್ಣಿನ ಆಪರೇಷನ್ ಮಾಡಿಸಿದ ಪತ್ನಿ

12:16 PM Sep 02, 2024 IST | prashanth
ಗೃಹಲಕ್ಷ್ಮಿ ಯೋಜನೆ ಹಣದಲ್ಲಿ ಪತಿಗೆ ಕಣ್ಣಿನ ಆಪರೇಷನ್ ಮಾಡಿಸಿದ ಪತ್ನಿ

ಬೆಳಗಾವಿ,ಸೆಪ್ಟಂಬರ್,2,2024 (www.justkannada.in): ರಾಜ್ಯ ಕಾಂಗ್ರೆಸ್ ಸರ್ಕಾರ ಜಾರಿಗೆ ತಂದಿರುವ ಐದು ಗ್ಯಾರಂಟಿ ಯೋಜನೆಗಳ ಪೈಕಿ ಗೃಹಲಕ್ಷ್ಮೀ ಯೋಜನೆಯಿಂದ ಮಹಿಳೆಯರಿಗೆ ಹೆಚ್ಚು ಅನುಕೂಲಗಳಾಗಿದ್ದು, ಇದೀಗ ಮಹಿಳೆಯೊಬ್ಬರು ತನ್ನ ಪತಿಗೆ ಈ ಹಣದಿಂದಲೇ ಕಣ್ಣಿನ ಆಪರೇಷನ್ ಮಾಡಿಸಿದ್ದಾರಂತೆ.

ಹೌದು,  ಬೆಳಗಾವಿ  ಜಿಲ್ಲೆ ಅನಗೋಳ ಗ್ರಾಮದ  ಮಹಿಳೆ ಅನಿತಾ ಬಡಿಗೇರ್ ಎಂಬುವವರು ತನ್ನ ಪತಿ  ಚಂದ್ರಶೇಖರ್ ಬಡಿಗೇರ್ ಗೆ ಗೃಹಲಕ್ಷ್ಮಿ ಹಣದಲ್ಲಿ ಕಣ್ಣಿನ ಆಪರೇಷನ್ ಮಾಡಿಸಿದ್ದಾರೆ. ಈ ಬಗ್ಗೆ ವಿಡಿಯೋ ಮಾಡಿ ಸಂತಸ ಹಂಚಿಕೊಂಡಿರುವ ಈ ದಂಪತಿಗಳು  ಸಿಎಂ ಸಿದ್ದರಾಮಯ್ಯ ಮತ್ತು ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಅವರಿಗೆ ಧನ್ಯವಾದ ಅರ್ಪಿಸಿದ್ದಾರೆ

ಗೃಹಲಕ್ಷ್ಮಿ ಯೋಜನೆಯಡಿ ತಿಂಗಳಲ್ಲಿ ಖಾತೆಗೆ ಬರುವ 2 ಸಾವಿರ ಹಣದಿಂದ ಮಹಿಳೆಯರು ಟಿವಿ, ಫ್ರಿಡ್ಜ್ ತೆಗೆದುಕೊಂಡ ಬಗ್ಗೆ ವರದಿಯಾಗಿತ್ತು. ಅಲ್ಲದೆ ಇತ್ತೀಚೆಗೆ ಬೆಳಗಾವಿಯಲ್ಲಿ ವೃದ್ದೆಯೊಬ್ಬರು ಗೃಹಲಕ್ಷ್ಮಿ ಹಣದಿಂದ ಊರಿಗೆ ಹೋಳಿಗೆ ಊಟ ಹಾಕಿಸಿದ್ದು ಗಮನ ಸೆಳೆದಿತ್ತು.

Key words:  wife, eye operation, husband, Grihalakshmi Yojana

Tags :

.