ಡಿಕೆಶಿ ವಿರುದ್ದ ಸಿಬಿಐ ತನಿಖೆ ಅನುಮತಿ ವಾಪಸ್: ಇದು ನ್ಯಾಯಾಂಗಕ್ಕೆ ಮಣ್ಣೆರೆಚುವ ಕೆಲಸ- ಆರ್.ಅಶೋಕ್.
ಬೆಂಗಳೂರು,ನವೆಂಬರ್,25,2023(www.justkannada.in): ಡಿಸಿಎಂ ಡಿಕೆ ಶಿವಕುಮಾರ್ ವಿರುದ್ದ ಸಿಬಿಐ ತನಿಖೆ ಅನುಮತಿ ವಾಪಸ್ ವಿಚಾರ ಸಂಬಂಧ ಇದು ನ್ಯಾಯಾಂಗಕ್ಕೆ ಮಣ್ಣೆರೆಚುವ ಕೆಲಸ ಎಂದು ವಿಪಕ್ಷ ನಾಯಕ ಆರ್.ಅಶೋಕ್ ಟೀಕಿಸಿದ್ದಾರೆ.
ಈ ಕುರಿತು ಮಾತನಾಡಿರುವ ಆರ್.ಅಶೋಕ್, ಸಿಎಂ ಸಿದ್ದರಾಮಯ್ಯ ವಕೀಲರಾಗಿದ್ದರು. ಈ ತೀರ್ಮಾನಕ್ಕೆ ಒಪ್ಪಿಗೆ ಸೂಚಿಸುತ್ತಿರಲಿಲ್ಲ ಸೋನಿಯಾಗಾಂಧಿ, ರಾಹುಲ್ ಗಾಂಧಿ ಒತ್ತಡದಿಂದ ಸಿಎಂ ಸಿದ್ದರಾಮಯ್ಯ ಒಪ್ಪಿದ್ದಾರೆ. ಡಿಕೆ ಶಿವಕುಮಾರ್ ರಕ್ಷಣೆಗಾಗಿಯೇ ವಿಶೇಷ ಸಂಪುಟ ಕರೆದಿದೆ. ಇದು ಸರ್ಕಾರಕ್ಕೆ ಕಪ್ಪು ಚುಕ್ಕೆ. ಪಾಪರ್ ಸರ್ಕಾರದ ವಿರುದ್ದ ಹೋರಾಡುತ್ತೇವೆ ಎಂದರು.
ಬಿಜೆಪಿಯಲ್ಲಿ ಅಸಮಾಧಾನ ವಿಚಾರ ಕುರಿತು ಪ್ರತಿಕ್ರಿಯಿಸಿದ ಆರ್.ಅಶೋಕ್, ಸಿಟಿ ರವಿ ಜಾರಕಿಹೊಳಿ ಅಸಮಾಧಾನವನ್ನ ಸರಿಪಡಿಸಲಾಗಿದೆ. ಶೇ.98 ರಷ್ಟು ಅಸಮಾಧಾನ ಶಮನವಾಗಿದೆ. ವಿ.ಸೋಮಣ್ಣ, ಯತ್ನಾಳ್ ಅಸಮಾಧಾನ ತಣಿಸಬೇಕಿದೆ. ಪ್ರಜಾಪ್ರಭುತ್ವದಲ್ಲಿ ಇವೆಲ್ಲಾ ಸಹಜ ಎಂದರು.
Key words: Withdrawal –CBI- investigation -permission -against DK Shivakumar - R. Ashok.