For the best experience, open
https://m.justkannada.in
on your mobile browser.

ಮಹಿಳೆ ವಿವಸ್ತ್ರಗೊಳಿಸಿ ಹಲ್ಲೆ ಪ್ರಕರಣ: ಸಂತ್ರಸ್ತ ಮಹಿಳೆಯ ಭೇಟಿಗೆ ನಿರ್ಬಂಧ ವಿಧಿಸಿದ ಹೈಕೋರ್ಟ್

06:13 PM Dec 16, 2023 IST | prashanth
ಮಹಿಳೆ ವಿವಸ್ತ್ರಗೊಳಿಸಿ ಹಲ್ಲೆ ಪ್ರಕರಣ  ಸಂತ್ರಸ್ತ ಮಹಿಳೆಯ ಭೇಟಿಗೆ ನಿರ್ಬಂಧ ವಿಧಿಸಿದ ಹೈಕೋರ್ಟ್

ಬೆಂಗಳೂರು,ಡಿಸೆಂಬರ್,16,2023(www.justkannada.in): ಬೆಳಗಾವಿ ತಾಲ್ಲೂಕಿನ ವಂಟಮೂರಿ ಗ್ರಾಮದಲ್ಲಿ ಮಹಿಳೆ ವಿವಸ್ತ್ರಗೊಳಿಸಿ ಹಲ್ಲೆ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಸಂತ್ರಸ್ತ ಮಹಿಳೆಯ ಭೇಟಿಗೆ ಹೈಕೋರ್ಟ್ ನಿರ್ಬಂಧ ವಿಧಿಸಿದೆ.

ಆಘಾತಕ್ಕೊಳಗಾಗಿರುವ ಸಂತ್ರಸ್ತೆಗೆ  ಚಿಕಿತ್ಸೆ ನೀಡುತ್ತಿರವ ಹಿನ್ನೆಲೆ ಸಂತ್ರಸ್ತ ಮಹಿಳೆಯ ಭೇಟಿಗೆ  ಹೈಕೋರ್ಟ್ ನಿರ್ಬಂಧ  ವಿಧಿಸಿದೆ.  ಮುಖ್ಯನ್ಯಾಯಮೂರ್ತಿ ಕಚೇರಿಯಲ್ಲೇ ಇಂದು ಪಿಐಎಲ್ ವಿಚಾರಣೆ  ನಡೆಯಿತು.

ಕೋರ್ಟ್ ಸಾಮಾನ್ಯವಾಗಿ ವ್ಯಕ್ತಿಗಳ ಸ್ವಾತಂತ್ರ್ಯ ನಿರ್ಬಂಧಿಸುವುದಿಲ್ಲ. ಆದರೆ ನೊಂದಿರುವ ಸಂತ್ರಸ್ತೆಗೆ ವೈದ್ಯರು ಚಿಕಿತ್ಸೆ ಒದಗಿಸುತ್ತಿದ್ದಾರೆ. ಹೀಗಾಗಿ ಸಂತ್ರಸ್ತೆ  ಭೇಟಿಗೆ ಷರತ್ತು ಬದ್ಧ ನಿರ್ಬಂಧ ವಿಧಿಸುತ್ತೇವೆ.   ಹೈಕೋರ್ಟ್ ವೈದ್ಯಾಧಿಕಾರಿಯ ಲಿಖಿತ ಅನುಮತಿಯಿಲ್ಲದೇ ವ್ಯಕ್ತಿ, ಸಂಘಟನೆ, ರಾಜಕೀಯ ಪಕ್ಷಗಳ ಭೇಟಿಗೆ  ನಿರ್ಬಂಧ ವಿಧಿಸಲಾಗಿದೆ.  ಆಯೋಗಗಳು ತನಿಖಾ ಸಂಸ್ಥೆಗಳು ಭೇಟಿ ಮಾಡಬಹುದು.  ಮಹಿಳೆಯ ಹಿತದೃಷ್ಠಿಯಿಂದ ಈ ತೀರ್ಮಾನ ಮಾಡಲಾಗಿದೆ ಎಂದು ಹೈಕೋರ್ಟ್ ತಿಳಿಸಿದೆ.

Key words: Woman assault- case- High Court-restricts- visit

Tags :

.