ಬಣ್ಣ ಬೆರೆಸುವ ಪೇಂಟ್ ಮಿಕ್ಸರ್ ಗೆ ಸಿಲುಕಿ ಮಹಿಳೆ ಸಾವು.
12:35 PM Nov 09, 2023 IST | veerabhadra
ಬೆಂಗಳೂರು,ನವೆಂಬರ್,9,2023(www.justkannada.in): ಬಣ್ಣ ಬೆರೆಸುವ ಪೇಂಟ್ ಮಿಕ್ಸರ್ ಗೆ ಸಿಲುಕಿ ಕೂದಲು ಸಿಲುಕಿ ಮಹಿಳೆಯ ಸಾವನ್ನಪ್ಪಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.
ನಗರದ ನೆಲಗದರನಹಳ್ಳಿಯಲ್ಲಿರುವ ಶ್ರೀಪೇಂಟ್ಸ್ ಕಾರ್ಖಾನೆಯಲ್ಲಿ ಈ ದುರ್ಘಟನೆ ನಡೆದಿದೆ. 33 ವರ್ಷದ ಶ್ವೇತಾ ಮೃತಪಟ್ಟ ಮಹಿಳೆ. ಬೆಂಗಳೂರಿನ ನೆಲಗದರನಹಳ್ಳಿಯಲ್ಲಿರುವ ಶ್ರೀಪೇಂಟ್ಸ್ ಕಾರ್ಖಾನೆಯಲ್ಲಿ ಶ್ವೇತಾ ಕೆಲಸ ಮಾಡುತ್ತಿದ್ದರು.
ಈ ನಡುವೆ ಬಣ್ಣ ಗಟ್ಟಿಯಾಗುತ್ತಿದ್ದರಿಂದ ಚೆಕ್ ಮಾಡಲು ಗ್ರೈಂಡರ್ ಒಳಗೆ ಮಹಿಳೆ ಶ್ವೇತಾ ಬಗ್ಗಿದಾಗ ಜಡೆ ಗ್ರೇಡರ್ ಗೆ ಸಿಲುಕಿದೆ. ಜಡೆ ಸಿಲುಕಿದಾಗ ಮಹಿಳೆ ಕೂಗಿಕೊಂಡರೂ ಸಹ ಗ್ರೈಂಡರ್ ಸೌಂಡ್ ಗೆ ಯಾರಿಗೂ ಕೇಳಿಸಿಲ್ಲ. ಮಹಿಳೆ ಗ್ರೈಂಡರ್ ಗೆ ಸಿಲುಕಿ ಮೃತಪಟ್ಟ ಬಳಿಕ ಉಳಿದ ಕೆಲಸಗಾರರು ಬಂದು ನೋಡಿದ್ದು, ಈ ಘಟನೆ ಬೆಳಕಿಗೆ ಬಂದಿದೆ. ಈ ಕುರಿತು ಪೀಣ್ಯಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Key words: woman-died –after- falling - paint mixer.