For the best experience, open
https://m.justkannada.in
on your mobile browser.

ಮೈಸೂರಿನ ಐಶ್(AIISH) ನಲ್ಲಿ ಕಾರ್ಯಗಾರ: ವಾಕ್-ಭಾಷಾ ತಜ್ಞರು, ವಿದ್ಯಾರ್ಥಿಗಳು ಸೇರಿ ಹಲವರು ಭಾಗಿ

05:30 PM Feb 22, 2024 IST | prashanth
ಮೈಸೂರಿನ ಐಶ್ aiish  ನಲ್ಲಿ ಕಾರ್ಯಗಾರ  ವಾಕ್ ಭಾಷಾ ತಜ್ಞರು  ವಿದ್ಯಾರ್ಥಿಗಳು ಸೇರಿ ಹಲವರು ಭಾಗಿ

ಮೈಸೂರು,ಫೆಬ್ರವರಿ,22,2024(www.justkannada.in):  ಮೈಸೂರಿನ ಅಖಿಲ ಭಾರತ ವಾಕ್ ಮತ್ತು ಶ್ರವಣ ಸಂಸ್ಥೆಯ (AIISH) ವಾಕ್-ಭಾಷಾ ದೋಷ ವಿಭಾಗವು “ವ್ಯಕ್ತಿಯ ಜೀವಿತಾವಧಿಯಲ್ಲಿ ಮೆದುಳು,  ಗ್ರಹಿಕೆ ಹಾಗೂ ವರ್ತನೆಯ ನಡುವಿನ ಸಂಬಂಧದ ವ್ಯಾಖ್ಯಾನ: ವಾಕ್-ಭಾಷಾ ತಜ್ಞರ ದೃಷ್ಟಿಕೋನ’ ದ ಕುರಿತು ಎರಡು ದಿನಗಳ ಕಾರ್ಯಾಗಾರವನ್ನು ಆಯೋಜಿಸಿತ್ತು.

ಮೆದುಳಿನ ನರಗಳು ಹಾಗೂ ಗ್ರಹಿಕೆ, ವರ್ತನೆ, ವಾಕ್-ಭಾಷಾ ಸಾಮರ್ಥ್ಯಗಳ ಮೇಲೆ ಅವುಗಳ ಪ್ರಭಾವದ ಕುರಿತು ವಾಕ್-ಭಾಷಾ ತಜ್ಞರ ಜ್ಞಾನವನ್ನು ಹೆಚ್ಚಿಸುವುದು ಕಾರ್ಯಾಗಾರದ ಮೂಲ ಉದ್ದೇಶವಾಗಿತ್ತು.

ಮೈಸೂರಿನ ಜೆಎಸ್ಎಸ್ ಆಸ್ಪತ್ರೆಯ  ನರರೋಗ ವಿಭಾಗದ ಮುಖ್ಯಸ್ಥರಾದ ಡಾ ಹರ್ಷ ಎಸ್. ಅವರು ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಸಮಾರಂಭವನ್ನು ಉದ್ಘಾಟಿಸಿದರು.   ಐಶ್(AIISH) ಸಂಸ್ಥೆಯ ನಿರ್ದೇಶಕರಾದ ಡಾ. ಎಂ. ಪುಷ್ಪಾವತಿ ಅವರು ಉದ್ಘಾಟನಾ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಸಂಸ್ಥೆಯ ವಾಕ್-ಭಾಷಾ ದೋಷ ವಿಭಾಗದ ಮುಖ್ಯಸ್ಥರು ಹಾಗೂ ಕಾರ್ಯಾಗಾರದ ಸಮನ್ವಯಕಾರರಾದ ಡಾ.ಜಯಶ್ರೀ ಸಿ ಶಾನ್ಬಾಲ್ ಅವರು  ದೇಶದ ವಿವಿಧೆಡೆಯಿಂಧ ಆಗಮಿಸಿದ್ದ ವಾಕ್-ಭಾಷಾ ತಜ್ಞರನ್ನು ಕಾರ್ಯಕ್ರಮಕ್ಕೆ ಸ್ವಾಗತಿಸಿದರು.

ಕಾರ್ಯಾಗಾರದಲ್ಲಿ ವಾಕ್-ಭಾಷಾ ತಜ್ಞರು, ಮಕ್ಕಳ ನರರೋಗ ತಜ್ಞರು ಸೇರಿದಂತೆ ನರವಿಜ್ಞಾನ ಕ್ಷೇತ್ರದ ಹಲವಾರು ಸಂಪನ್ಮೂಲ ವ್ಯಕ್ತಿಗಳು ಭಾಗವಹಿಸಿದ್ದರು.

ಗ್ರಹಿಕೆ, ವರ್ತನೆ ಮತ್ತು ವಾಕ್-ಭಾಷಾ ಸಾಮರ್ಥ್ಯಗಳ ಮೇಲೆ ಮೆದುಳಿನ ಪ್ರಭಾದ ಕುರಿತು ಚರ್ಚಿಸಲಾಯಿತು. ದೇಶದ ವಿವಿಧ ಸಂಸ್ಥೆಗಳು ಮತ್ತು ಕೇಂದ್ರಗಳ 200 ಕ್ಕೂ ಹೆಚ್ಚು ವಿದ್ಯಾರ್ಥಿಗಳು ಮತ್ತು ವಾಕ್-ಭಾಷಾ ತಜ್ಞರು ಕಾರ್ಯಾಗಾರದಲ್ಲಿ ಭಾಗಹಿಸಿದ್ದರು.

Key words: Workshop – AIISH-Mysore-Speech-Language Specialists- Students -Participated

Tags :

.