For the best experience, open
https://m.justkannada.in
on your mobile browser.

ವಿಶ್ವ ಸ್ತನ್ಯಪಾನ ಸಪ್ತಾಹ 2024: ಜೆಎಸ್‌ಎಸ್ ವೈದ್ಯಕೀಯ ಕಾಲೇಜು ವತಿಯಿಂದ ಸ್ತನ್ಯಪಾನದ ಪ್ರಾಮುಖ್ಯತೆ ಬಗ್ಗೆ ಅರಿವು

05:15 PM Aug 08, 2024 IST | prashanth
ವಿಶ್ವ ಸ್ತನ್ಯಪಾನ ಸಪ್ತಾಹ 2024  ಜೆಎಸ್‌ಎಸ್ ವೈದ್ಯಕೀಯ ಕಾಲೇಜು ವತಿಯಿಂದ ಸ್ತನ್ಯಪಾನದ ಪ್ರಾಮುಖ್ಯತೆ ಬಗ್ಗೆ ಅರಿವು

ಮೈಸೂರು,ಆಗಸ್ಟ್,8,2024:  ಮೈಸೂರು ಸಮುದಾಯ ವೈದ್ಯಶಾಸ್ತ್ರ ವಿಭಾಗ, ಜೆಎಸ್‌ಎಸ್ ವೈದ್ಯಕೀಯ ಕಾಲೇಜು, ಜೆಎಸ್‌ಎಸ್ ಉನ್ನತ ಶಿಕ್ಷಣ ಮತ್ತು ಸಂಶೋಧನೆ ಅಕಾಡೆಮಿ, ಮೈಸೂರು ವಿಶ್ವ ಸ್ತನ್ಯಪಾನ ಸಪ್ತಾಹ 2024 ರ ಅಂಗವಾಗಿ ದಿನಾಂಕ 01/08/2024 ರಂದು ಜೆಎಸ್‌ಎಸ್ ಕಾಲೇಜ್ ಆಫ್ ನರ್ಸಿಂಗ್ ಮತ್ತು ದಿನಾಂಕ 02/08/2024 ರಂದು ಜೆಎಸ್‌ಎಸ್ ವೈದ್ಯಕೀಯ ಕಾಲೇಜಿನ ಎಂ.ಬಿ.ಬಿ.ಎಸ್ ವಿದ್ಯಾರ್ಥಿಗಳಿಗೆ ರಸಪ್ರಶ್ನೆ ಸ್ಪರ್ಧೆಗಳನ್ನು ಆಯೋಜಿಸಲಾಗಿತ್ತು.

ದಿನಾಂಕ 07/08/2024( ಬುಧವಾರ)  ರಂದು "ಅಂತರವನ್ನು ಮುಚ್ಚುವುದು: ಎಲ್ಲರಿಗೂ ಸ್ತನ್ಯಪಾನ ಬೆಂಬಲ" ಎಂಬ ಥೀಮ್‌ ನೊಂದಿಗೆ ವೆಬಿನಾರ್ ಅನ್ನು ಆಯೋಜಿಸಲಾಗಿತ್ತು. ಕಾರ್ಯಕ್ರಮವು 'ಚೇತನ'-ಸಮುದಾಯ ಆರೋಗ್ಯ ಮತ್ತು ಶಿಕ್ಷಣ, ತರಬೇತಿ ಮತ್ತು ಜಾಗೃತಿ ಪ್ರಚಾರ-ನೆಟ್ವರ್ಕಿಂಗ್ ಫಾರ್ ಆಕ್ಷನ್, ಯೂಟ್ಯೂಬ್ ಚಾನೆಲ್ ಅನ್ನು ಪ್ರಾರಂಭಿಸುವುದರೊಂದಿಗೆ ಪ್ರಾರಂಭವಾಯಿತು.

ಪ್ರಾಂಶುಪಾಲ ಡಾ ಬಸವನಗೌಡಪ್ಪ, ಉಪ-ಪ್ರಾಂಶುಪಾಲರು (ಪ್ರಿಕ್ಲಿನಿಕಲ್) ಡಾ.ಸುಮಾ ಎಂ.ಎನ್ ಮತ್ತು ಡಾ. ಪ್ರವೀಣ್ ಕುಲಕರ್ಣಿ ಉಪ-ಪ್ರಾಂಶುಪಾಲರು (ಪ್ಯಾರಾಕ್ಲಿನಿಕಲ್) ಮತ್ತು ಡಾ ಸುನಿಲ್ ಕುಮಾರ್ ಡಿ, ಪ್ರಾಧ್ಯಾಪಕರು ಮತ್ತು ಮುಖ್ಯಸ್ಥರು, ಸಮುದಾಯ ವೈದ್ಯಶಾಸ್ತ್ರ ವಿಭಾಗ. ಡಾ.ಸುಷ್ಮ ಕೃಷ್ಣಗೌಡ, ಅಸೋಸಿಯೆಟ್ ಪೋಫೆಸರ್ ಪ್ರಾಧ್ಯಾಪಕರು. NICU, ಮಕ್ಕಳ ವಿಭಾಗ, ಜೆಎಸ್ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆ,  ಡಾ. ಪ್ರಶಾಂತ್ ರನ್ಯ ರಾಘವೇಂದ್ರ, ನಿಯೋನಾಟಾಲಜಿಸ್ಟ್, DHEE ಆಸ್ಪತ್ರೆ ಮತ್ತು IGICH, ಬೆಂಗಳೂರು ಮತ್ತು ಡಾ. ರೇಣುಕಾ ಎಂ, ಪ್ರಾಧ್ಯಾಪಕರು, ಸಮುದಾಯ ವೈದ್ಯಶಾಸ್ತ್ರ ವಿಭಾಗ ಇವರುಗಳು ಸ್ತನ್ಯಪಾನದ ಪ್ರಾಮುಖ್ಯತೆ, ಅದರ ಸುತ್ತಲಿನ ತಪ್ಪು ಕಲ್ಪನೆಗಳು, ಕುಟುಂಬದ ಸದಸ್ಯರ ಭಾಗವಹಿಸುವಿಕೆ, ವಿಶೇಷ ಅಗತ್ಯತೆಗಳಲ್ಲಿ ಸ್ತನ್ಯಪಾನ, ಹಾಲು ಬ್ಯಾಂಕ್ ಮತ್ತು ಸ್ತನ್ಯಪಾನವನ್ನು ಉತ್ತೇಜಿಸಲು ಎಲ್ಲರನ್ನೂ ಸೇರಿಸಿಕೊಳ್ಳುವುದರೊಂದಿಗೆ ವೆಬಿನಾರ್ ಉದ್ದಕ್ಕೂ ತಮ್ಮ ಜ್ಞಾನವನ್ನು ಪ್ರೇಕ್ಷಕರಿಗೆ ತಿಳಿಯಪಡಿಸಿದರು.

ಕಾರ್ಯಕ್ರಮದಲ್ಲಿ ಸಹಾಯಕ ಪ್ರಾಧ್ಯಾಪಕಿ ಡಾ.ಅಮೋಘಶ್ರೀ, ಸೀನಿಯರ್ ರೆಸಿಡೆನ್ಸಿ ಡಾ.ರಶ್ಮಿ ಎಸ್, ಸ್ನಾತಕೋತ್ತರ ಪದವೀಧರರಾದ ಡಾ.ಜೆಸ್ಸಿಮೋಲ್ ಜಾಯ್, ಡಾ.ಮನಿರ್ಷಾ ಪಿ.ವಿ., ಡಾ.ದೀಪಿಕಾ ಆರ್., ಕೋಡೀಶ್ವರನ್ ಎಂ. ಸಮುದಾಯ ವೈದ್ಯಶಾಸ್ತ್ರ ವಿಭಾಗದ ಅಧ್ಯಾಪಕರು ಹಾಗೂ ಸ್ನಾತಕೋತ್ತರ ಪದವೀಧರರು GO ಉಪಸ್ಥಿತರಿದ್ದರು. ವೆಬಿನಾರ್ ಸಮಯದಲ್ಲಿ 200 ಕ್ಕೂ ಹೆಚ್ಚು ಜನ ಭಾಗವಹಿಸಿದ್ದರು ಮತ್ತು ಭಾಗವಹಿಸುವವರಿಗೆ ಇ-ಪ್ರಮಾಣಪತ್ರಗಳನ್ನ ನೀಡಲಾಯಿತು.

Key words: World Breastfeeding Week 2024,  Awareness, JSS Medical College

Tags :

.