ವಿಶ್ವಕಪ್ ಕ್ರಿಕೆಟ್: ಸೆಮೀಸ್’ಗೆ ತಲುಪುವ ನಾಲ್ಕನೇ ತಂಡ ಯಾವುದು? ಭಾರತಕ್ಕೆ ಎದುರಾಳಿ ಯಾರಾಗಬಹುದು…?!
ಬೆಂಗಳೂರು, ನವೆಂಬರ್ 08, 2023 (www.justkannada.in): ವಿಶ್ವಕಪ್ ಕ್ರಿಕೆಟ್ ಪಂದ್ಯಾವಳಿಯ ಪಾಯಿಂಟ್ ಪಟ್ಟಿಯಲ್ಲಿ ದಕ್ಷಿಣ ಆಫ್ರಿಕಾ ಎರಡನೇ ಸ್ಥಾನದಲ್ಲಿದ್ದು, ಆಸ್ಟ್ರೇಲಿಯಾ ಮೂರನೇ ಸ್ಥಾನದಲ್ಲಿದೆ. ಹೀಗಾಗಿ ಈ ಎರಡು ತಂಡಗಳು ಸೆಮಿಫೈನಲ್ನಲ್ಲಿ ಮುಖಾಮುಖಿಯಾಗಲಿವೆ.
ಪಾಯಿಂಟ್ ಪಟ್ಟಿಯಲ್ಲಿ ನಂ.1 ಸ್ಥಾನದಲ್ಲಿರುವ ಭಾರತ ಯಾರನ್ನು ಎದುರಿಸಲಿದೆ ಎಂಬ ಕುತೂಹಲ ಕ್ರೀಡಾ ಪ್ರೇಮಿಗಳಲ್ಲಿ ಮೂಡಿದೆ. ಪ್ರಸ್ತುತ ನಾಲ್ಕನೇ ಸ್ಥಾನಕ್ಕಾಗಿ ನ್ಯೂಜಿಲೆಂಡ್, ಪಾಕಿಸ್ತಾನ ಮತ್ತು ಅಫ್ಘಾನಿಸ್ತಾನ ನಡುವೆ ಫೈಟ್ ನಡೆಯುತ್ತಿದೆ. ಈ ಮೂರು ತಂಡಗಳು ತಲಾ 8 ಅಂಕಗಳನ್ನು ಹೊಂದಿವೆ.
ಹೀಗಾಗಿ ಮುಂದಿನ ಪಂದ್ಯದಲ್ಲಿ ಗೆಲುವಿನೊಂದಿಗೆ ನೆಟ್ ರನ್ ರೇಟ್ ಅನ್ನು ಉತ್ತಮ ರೀತಿಯಲ್ಲಿ ಕಾಯ್ದುಕೊಳ್ಳುವುದು ಸವಾಲಾಗಿದೆ. ಹೀಗಾಗಿ ಮೂರೂ ತಂಡಗಳು ಪರಸ್ಪರರನ್ನು ಸೋಲಿಸಲು ತೀವ್ರ ಪ್ರಯತ್ನ ನಡೆಸಲಿವೆ.
ಕೊನೆಯ ಪಂದ್ಯದಲ್ಲಿ ಮೂವರೂ ಗೆದ್ದರೆ, ನೆಟ್ ರನ್ರೇಟ್ ಉತ್ತಮವಾಗಿರುವ ತಂಡ ಸೆಮಿಫೈನಲ್ಗೇರಲಿದೆ. ಹೀಗಾಗಿ ಒಂದು ಸ್ಥಾನಕ್ಕಾಗಿ ಈಗ ಮೂರು ತಂಡಗಳ ನಡುವೆ ಕದನ ನಡೆಯುತ್ತಿದೆ.