HomeBreaking NewsLatest NewsPoliticsSportsCrimeCinema

ಜೆಎಸ್ ಎಸ್ ವೈದ್ಯಕೀಯ ಕಾಲೇಜು ವತಿಯಿಂದ ವಿಶ್ವ ಪರಿಸರ ದಿನ : ಜಾಗೃತಿ ಜಾಥಾ, ಕಿರು ನಾಟಕ ಪ್ರದರ್ಶನ.

05:55 PM Jun 07, 2024 IST | prashanth

ಮೈಸೂರು,ಜೂನ್,7,2024 (www.justkannada.in):  ಸಮುದಾಯ ವೈದ್ಯಶಾಸ್ತ್ರವಿಭಾಗ, ಜೆ ಎಸ್ ಎಸ್ ನಗರ ಆರೋಗ್ಯ ಕೇಂದ್ರ, ಜೆ ಎಸ್ ಎಸ್ ವೈದ್ಯಕೀಯ ಕಾಲೇಜು, ಮೈಸೂರು, ಮೇದರ್ ಬ್ಲಾಕ್, ಬಂಬೂ ಬಜಾರ್‌ನಲ್ಲಿರುವ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಸಹಯೋಗದೊಂದಿಗೆ ವಿಶ್ವ ಪರಿಸರ ದಿನವನ್ನು ಆಚರಿಸಲಾಯಿತು.

ಸಮುದಾಯ ವೈದ್ಯಶಾಸ್ತ್ರವಿಭಾಗದ ಪ್ರಾಧ್ಯಾಪಕರು ಮತ್ತು ಮುಖ್ಯಸ್ಥರಾದ ಡಾ. ಸುನೀಲ್ ಕುಮಾರ್ ಡಿ ಅವರು ಲ್ಯಾಂಡ್ ರೀಸ್ತೋರೆಶನ್, ಸ್ಟಾಪ್ಪಿಂಗ್ ಡೆಸರ್ಟಿಫಿಕೇಶನ್ ಮತ್ತು ಬಿಲ್ಡಿಂಗ್ ಡ್ರಾಟ್ ರಿಸೈಲೆನ್ಸ್" ವಿಷಯದ ಕುರಿತು ಉಪನ್ಯಾಸ ನೀಡಿದರು. ಪರಿಸರ ಸಂರಕ್ಷ ಣೆ ಮತ್ತು ಗಿಡಗಳನ್ನು ನೆಡುವ ಮಹತ್ವವನ್ನು ಒತ್ತಿ ಹೇಳಿದರು.

ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳು ಮೇದಾರ ಬ್ಲಾಕ್‌ ನ ಬೀದಿಗಳಲ್ಲಿ  ಜಾಥಾ ಮಾಡುವ ಮುಖಾಂತರ  ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಿದರು ಮತ್ತು ಕಿರುನಾಟಕ ಪ್ರದರ್ಶಿಸಲಾಯಿತು.

ಜೆ ಎಸ್ ಎಸ್ ಯು ಎಚ್ ಸಿ ಆವರಣದಲ್ಲಿ ಮತ್ತು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ, ಜೆ ಎಸ್ ಎಸ್ ಯು ಎಚ್ ಸಿ ಸಿಬ್ಬಂದಿ ಮತ್ತು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕರು ಸಸಿಗಳನ್ನು ನೆಟ್ಟರು.

ಸಮುದಾಯ ವೈದ್ಯಶಾಸ್ತ್ರ ವಿಭಾಗದ ಪ್ರಾಧ್ಯಾಪಕ ಮತ್ತು ಮುಖ್ಯಸ್ಥ ಡಾ.ಸುನೀಲ್ ಕುಮಾರ್ ಡಿ, ಜೆಎಸ್ಎಸ್ ಯುಎಚ್‌ ಸಿ ಯ ವೈದ್ಯಾಧಿಕಾರಿ ಡಾ.ರಾಮ ಹೆಚ್.ವಿ, ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಯಿನಿ ಭಾಗ್ಯಲಕ್ಷ್ಮಿ, ಜೆಎಸ್ಎಸ್ ಎಂಸಿಯ ಇಂಟರ್ನ್‌ ಗಳು ಮತ್ತು ಜೆಎಸ್‌ಎಸ್ ಡಿಸಿ, ಜೆಎಸ್‌ಎಸ್ ಯುಎಚ್‌ ಸಿ ಮತ್ತು ಶಾಲೆಯ ಸಿಬ್ಬಂದಿಗಳು ಭಾಗವಹಿಸಿದ್ದರು.

Key words: World Environment Day, JSS Medical, College, mysore

Tags :
CollegeJSS MedicalMysore.World Environment Day
Next Article