HomeBreaking NewsLatest NewsPoliticsSportsCrimeCinema

ವಿಶ್ವ ಪರಿಸರ ದಿನಾಚರಣೆ: ಪರಿಸರ ಬಳಗದಿಂದ ಜೂನ್ 5 ರಂದು ಗಿಡ ನೆಡುವ ಕಾರ್ಯಕ್ರಮ

05:05 PM Jun 03, 2024 IST | prashanth

ಮೈಸೂರು,ಜೂನ್,3,2024 (www.justkannada.in): ಭಾರತೀಯ ಜೈನ ಸಂಘಟನೆಯು ಪರಿಸರ ಬಳಗ, ಪಿಂಜ್ರಾಪೋಲ್‌ ಸೊಸೈಟಿ, ಕ್ಲೀನ್‌ ಮೈಸೂರು ಫೌಂಡೇಶನ್‌ "ಪರಿಸರಕ್ಕಾಗಿ. ನಾವು' ಮತ್ತು ಪ್ರಗತಿ ಮಹಿಳಾ ಒಕ್ಕಲಿಗರ ಸಂಘ ಇವುಗಳ ಸಹಯೋಗದಲ್ಲಿ ದಿನಾಂಕ 5-6-24 ರ ಬುಧವಾರ ಬೆಳಿಗ್ಗೆ 8.30 ಗಂಟೆಗೆ ಪಿಂಜ್ರಾಪೋಲ್‌ ಸೊಸೈಟಿ ಆವರಣದಲ್ಲಿ ವಿವಿಧ ಬಗೆಯ ಸುಮಾರು 200 ಗಿಡಗಳನ್ನು ನೆಡುವ ಮೂಲಕ ವಿಶ್ವ ಪರಿಸರ ದಿನಾಚರಣೆಯನ್ನು ಆಚರಿಸಲಾಗುತ್ತಿದೆ.

ಈ ಕಾರ್ಯಕ್ರಮವನ್ನು ಕಾಳೇಗೌಡ ನಾಗವಾರ, ಕೆ. ಕಾಳಚನ್ನೇಗೌಡ , ಸುಮತಿಲಾಲ್‌ ಪಗಾರಿಯಾ, ಪ್ರವೀಣ್‌ ಲುಂಕರ್‌, ರಾಗಿಣಿ ಆಲನಹಳ್ಳಿ ಇವರುಗಳು ಜಂಟಿಯಾಗಿ ಉದ್ವಾಟಿಸಲಿದ್ದಾರೆ. ಮೇಲಿನ ಸಂಘಟನೆಗಳ 200 ಕ್ಕೂ ಹೆಚ್ಚು ಪರಿಸರ ಕಾರ್ಯಕರ್ತರು ಭಾಗವಹಿಸುತ್ತಾರೆ.

ಪಿಂಜ್ರಾಪೋಲ್‌ ಆವರಣವು ಸುಮಾರು 60 ಎಕರೆ ವಿಸ್ತೀರ್ಣ ಹೊಂದಿದ್ದು, ಇಲ್ಲಿ ನಾಲ್ಕು ಹಂತದಲ್ಲಿ ವಿವಿಧ ಬಗೆಯ ಒಂದು ಸಾವಿರ ಗಿಡಗಳನ್ನು ನೆಟ್ಟು ಬೆಳೆಸುವ ಗುರಿಯನ್ನು ಹೊಂದಲಾಗಿದ್ದು, ವಿಶ್ವ ಪರಿಸರ ದಿನದಂದು ಮೊದಲ ಹಂತ ಪ್ರಾರಂಭವಾಗಲಿದೆ ಎಂದು ಪರಿಸರ ಬಳಗದ ಸಂಸ್ಥಾಪಕ ಸದಸ್ಯ ಪರಶುರಾಮೇಗೌಡ ತಿಳಿಸಿದ್ದಾರೆ.

Key words: World Environment Day, Tree Planting, Program , 5th June

Tags :
World Environment Day- Tree Planting-Program -5th June
Next Article