ವಿಶ್ವ ಅಧಿಕ ರಕ್ತದೊತ್ತಡ ದಿನ: ಉಚಿತ ಆರೋಗ್ಯ ಶಿಬಿರ, ವಿದ್ಯಾರ್ಥಿಗಳಿಂದ ಜಾಗೃತಿ ಜಾಥಾ.
ಮೈಸೂರು,ಮೇ,18,2024 (www.justkannada.in): ಸಮುದಾಯ ವೈದ್ಯಶಾಸ್ತ್ರ ವಿಭಾಗ, ಜೆ.ಎಸ್.ಎಸ್. ವೈದ್ಯಕೀಯ ಮಹಾವಿದ್ಯಾಲಯ, ಜೆಎಸ್‌ಎಸ್. ಉನ್ನತ. ಶಿಕ್ಷಣ ಮತ್ತು ಸಂಶೋಧನಾ ಅಕಾಡೆಮಿ, ಮೈಸೂರು ಇವರ ವತಿಯಿಂದ ವಿಶ್ವ ಅಧಿಕ ರಕ್ತದೊತ್ತಡ ಇದರ ಅಂಗವಾಗಿ ಇಂದು ಉಚಿತ ಆರೋಗ್ಯ ಶಿಬಿರವನ್ನು ಹಂಚ್ಯಾ ಪ್ರಾಥಮಿಕ ಆರೋಗ್ಯ ಕೇಂದ್ರದ ಉಪಕೇಂದ್ರವಾದ ಕೆ.ಆರ್.ಮಿಲ್ಸ್ ನಲ್ಲಿ ಆಯೋಜಿಸಲಾಗಿತ್ತು.
ಹಂಚ್ಯಾ ಪ್ರಾಥಮಿಕ ಆರೋಗ್ಯ ಕೇಂದ್ರ ವೈದ್ಯಾಧಿಕಾರಿಗಳಾದ ಡಾ. ರವೀಂದ್ರ ರವರು ಅಧಿಕ ರಕ್ತದೊತ್ತಡ ಲಕ್ಷಣಗಳು ಮತ್ತು ಚಿಕಿತ್ಸೆಯ ಬಗ್ಗೆ ಅರಿವು ಮೂಡಿಸಲು ಮೊದಲನೇ ವರ್ಷದ ಎಂಬಿಬಿಎಸ್ ವಿದ್ಯಾರ್ಥಿಗಳಿಂದ ಜಾಥಾವನ್ನು ಹಮ್ಮಿಕೊಂಡಿದ್ದರು. ಶಿಬಿರದಲ್ಲಿ ಬಿಪಿ ಮಾಪನ, ರಕ್ತದಲ್ಲಿನ ಸಕ್ಕರೆ ಮತ್ತು ಹಿಮೋಗ್ಲೋಬಿನ್ ಅಂದಾಜು ಪರೀಕ್ಷೆ ಮಾಡಲಾಯಿತು. ಎಲ್ಲಾ ಫಲಾನುಭವಿಗಳಿಗೆ ಉಚಿತ ಔಷಧಿಗಳನ್ನು ಹಾಗೂ ಸಲಹೆ ಮತ್ತು ಆರೋಗ್ಯ ಶಿಕ್ಷಣವನ್ನು ಕೂಡ ನೀಡಲಾಯಿತು. ಸುಮಾರು 120 ಜನರು ಆರೋಗ್ಯ ಶಿಬಿರದ ಪ್ರಯೋಜನ ಪಡೆದುಕೊಂಡರು.
ಈ ಸಂದರ್ಭದಲ್ಲಿ ವೈದ್ಯಕೀಯ ಕಾಲೇಜಿನ ಸಮುದಾಯ ವೈದ್ಯಶಾಸ್ತ್ರ ವಿಭಾಗದ ಡಾ. ಶ್ವೇಟಾ ಮತ್ತು ಡಾ. ಸುನೀತಾ ಸಿಂಗ್, ಸೀನಿಯರ್ ರೆಸ್ ಡೆನ್ಸ್ ಮತ್ತು ಸಿಬ್ಬಂದಿ. ಸ್ನಾತಕೋತರ ಪದವೀಧರರು ಮತ್ತು ಜೆ.ಎಸ್.ಎಸ್ ಆಸ್ಪತ್ರೆಯ ಮೆಡಿಸನ್ ವಿಭಾಗ ಓಬಿಜಿ ವಿಭಾಗ ಮತ್ತು ಮಕ್ಕಳ ವಿಭಾಗದ ಸ್ನಾತಕೋತ್ತರ ಪದವೀಧರರು ಹಾಗೂ ವೈದ್ಯಕೀಯ ಸಾಮಾಜಿಕ ಕಾರ್ಯಕರ್ತರು ಹಂಚ್ಯಾ ಪಿಹೆಚ್‌ಸಿ ಸಿಬ್ಬಂದಿ ಮತ್ತು ಆರೋಗ್ಯ ಕಾರ್ಯಕರ್ತೆಯರು ಉಪಸ್ಥಿತರಿದ್ದರು.
Key words: World Hypertension Day, awareness, JSS, Mysore