HomeBreaking NewsLatest NewsPoliticsSportsCrimeCinema

ಉರಗ ಸಂತತಿಯ ಉಳಿವು ಮುಖ್ಯ :ಉರಗ ತಜ್ಞ ಸ್ನೇಕ್ ಶಾಮ್

02:15 PM Jul 16, 2024 IST | mahesh

 

ಮೈಸೂರು, ಜು,16,2024: (www.justkannada.in news) ವಿಶ್ವ ಹಾವು ಗಳ ದಿನಾಚರಣೆ ಅಂಗವಾಗಿ   85000 ಸಾವಿರಕ್ಕೂ ಹೆಚ್ಚು ಹಾವುಗಳನ್ನು ಸಂರಕ್ಷಿಸಿದ ಉರುಗ ತಜ್ಞ ಸ್ನೇಕ್ ಶಾಮ್ ರವರನ್ನು ಗೌರವಿಸಲಾಯಿತು.

ಕೆಎಂಪಿಕೆ ಚಾರಿಟೇಬಲ್ ಟ್ರಸ್ಟ್ ಹಾಗೂ ಜೀವದಾರ ರಕ್ತ ನಿಧಿ ಕೇಂದ್ರ ದ ವತಿಯಿಂದ  ಉರುಗ ತಜ್ಞ ಸ್ನೇಕ್ ಶಾಮ್ ರವರಿಗೆ ಸನ್ಮಾನಿಸಿ ಅಭಿನಂದಿಸಲಾಯಿತು

ಸನ್ಮಾನ ಸ್ವೀಕರಿಸಿ ಮಾತನಾಡಿದ ಉರಗತಜ್ಞ ಸ್ನೇಕ್ ಶ್ಯಾಮ್ ಹೇಳಿದಿಷ್ಟು..

ಉರಗ ಸಂತತಿಯ ಉಳಿವು ಮುಖ್ಯ , ಪರಿಸರ ಸಮತೋಲನಕ್ಕೆ ಉರಗ ಸಂತತಿಯ ಉಳಿವೂ ಮುಖ್ಯ ,ಪ್ರತಿಯೊಬ್ಬರೂ ತಮ್ಮ ಮನೆಯ ಸುತ್ತಮುತ್ತಲಿನ ಉಪಯುಕ್ತ ಸ್ಥಳದಲ್ಲಿಯೇ ಗಿಡಗಳನ್ನು ನೆಟ್ಟು ಬೆಳೆಸಬೇಕು. ಆ ಮೂಲಕ ಪರಿಸರವನ್ನು ಶುದ್ಧವಾಗಿಸುವ ಅಲ್ಪ ಸೇವೆಯನ್ನು ಮಾಡಿದಂತಾಗುತ್ತದೆ ಎಂದರು.

ಪರಿಸರದಲ್ಲಿರುವ ಪ್ರತಿಯೊಂದು ಜೀವಿಯೂ ಒಂದನ್ನೊಂದು ಅವಲಂಬಿಸಿಯೇ ಬದುಕುವ ಕಾರಣ ಪ್ರತಿಯೊಂದಕ್ಕೂ ಪ್ರಾಮುಖ್ಯತೆಯಿದೆ. ಎಲ್ಲವನ್ನೂ ಗೌರವಿಸಿ ಎಂದು ಹೇಳಿದ ಅವರು, ಉರಗಗಳ ಬಗೆಗೆ ವಿಶೇಷ ಮಾಹಿತಿಯನ್ನು ನೀಡಿದರು. ಉರಗ ಪ್ರಭೇದಗಳು, ಅವುಗಳ ಸಂತತಿ, ಹಾವಿನ ಕಡಿತದ ಬಳಿಕ ನಡೆಸುವ ಪ್ರಥಮ ಚಿಕಿತ್ಸೆಗಳ ಕುರಿತು  ಮಾಹಿತಿ ನೀಡಿದರು.

ಹೋಟೆಲ್ ಮಾಲೀಕರ ಸಂಘದ ಅಧ್ಯಕ್ಷ ನಾರಾಯಣಗೌಡ, ನಜರ್ಬಾದ್ ನಟರಾಜ್, ಕೆ ಆರ್ ಬ್ಯಾಂಕ್ ಉಪಾಧ್ಯಕ್ಷ ಬಸವರಾಜ್ ಬಸಪ್ಪ, ಜೀವದಾರ ರಕ್ತ ನಿಧಿ ಕೇಂದ್ರದ ನಿರ್ದೇಶಕ ಗಿರೀಶ್, ಜಿ ರಾಘವೇಂದ್ರ, ಪ್ರಕಾಶ್ ಪ್ರಿಯದರ್ಶನ್, ಪರಮೇಶ್ ಗೌಡ, ಕೆ ಎಂ ಪಿ ಕೆ ಟ್ರಸ್ಟ್ ಅಧ್ಯಕ್ಷ ವಿಕ್ರಮ ಅಯ್ಯಂಗಾರ್, ಅಜಯ್ ಶಾಸ್ತ್ರಿ, ಕೆ ಎಂ ನಿಶಾಂತ್, ಅಪೂರ್ವ ಸುರೇಶ್, ಬೈರತಿ ಲಿಂಗರಾಜು, ಸುಚಿಂದ್ರ, ಚಕ್ರಪಾಣಿ, ಎಸ್ ಎನ್ ರಾಜೇಶ್, ಸದಾಶಿವ್, ಸಚಿನ್ ನಾಯಕ್, ಸಫಿ, ರಾಕೇಶ್, ಹಾಗೂ ಇನ್ನಿತರರು ಹಾಜರಿದ್ದರು

key words: world snake day, at Mysore, snake sham

Tags :
at-mysoreSnake Shamworld snake day
Next Article