For the best experience, open
https://m.justkannada.in
on your mobile browser.

ಇಂಡಿಯಾ ಮೈತ್ರಿಕೂಟ ನಾವು ಒಡೆಯುತ್ತಿದ್ದೇವೆ ಅನ್ನೋದು ತಪ್ಪು-ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ.

03:30 PM Feb 23, 2024 IST | prashanth
ಇಂಡಿಯಾ ಮೈತ್ರಿಕೂಟ ನಾವು ಒಡೆಯುತ್ತಿದ್ದೇವೆ ಅನ್ನೋದು ತಪ್ಪು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ

ಹುಬ್ಬಳ್ಳಿ, ಫೆಬ್ರವರಿ 23,2024(www.justkannada.in): ಇಂಡಿಯಾ ಒಕ್ಕೂಟವನ್ನ ನಾವು ಒಡೆಯುತ್ತಿದ್ದೇವೆ ಅನ್ನೋದು ತಪ್ಪು. ಅವರವರೇ ಜಗಳ ಮಾಡಿಕೊಂಡು ಹೊರಗೆ ಬರುತ್ತಿದ್ದಾರೆ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಲೇವಡಿ ಮಾಡಿದರು.

ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ,   ರಾಹುಲ್ ಗಾಂಧಿಗೆ ಅಪಕ್ವತೆ ಇರುವುದರಿಂದ ನಿಮ್ಮ ಪಕ್ಷ ನಂಬಿ ಬರಲು ಯಾರೂ ತಯಾರಿಲ್ಲ. ಇದೊಂದು ಅವಕಾಶವಾದಿಗಳ ಕೂಟ ಅಂತ ಆರಂಭದಲ್ಲಿ ನಾವು ಹೇಳಿದ್ದೇವು. ಇದೊಂದು ಫೋಟೋಶೂಟ್ ಆಗುತ್ತೆ, ಮುಂದೇನು ಆಗಲ್ಲಾ ಅಂದಿದ್ದೆ ಎಂದು ವ್ಯಂಗ್ಯವಾಡಿದರು.

ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಅವರು ದೆಹಲಿಯಲ್ಲಿ ಬಿಜೆಪಿ ವರಿಷ್ಠರನ್ನು ಭೇಟಿ ಮಾಡಿದ್ದಾರೆ. ಆದರೆ, ಯಾವುದೇ ಟಿಕೆಟ್ ಹಂಚಿಕೆ ಬಗ್ಗೆ ತೀರ್ಮಾನ ಆಗಿಲ್ಲ. ಬಿಜೆಪಿ ರಾಜ್ಯ ಘಟಕ ಮತ್ತು ಜೆಡಿಎಸ್ ರಾಜ್ಯ ಘಟಕದೊಂದಿಗೆ ಇಷ್ಟರಲ್ಲೇ ಹೈಕಮಾಂಡ್ ಮಾತುಕತೆ ನಡೆಸಲಿದೆ. ಬಳಿಕವೇ ಟಿಕೆಟ್ ಹಂಚಿಕೆ  ಅಂತಿಮವಾಗಲಿದೆ ಎಂದು ಪ್ರಹ್ಲಾದ್ ಜೋಶಿ ತಿಳಿಸಿದರು.

Key words: wrong - breaking - India alliance - Union Minister -Prahlad Joshi

Tags :

.