5 ವರ್ಷ ಸಿಎಂ ಕುರಿತು ಯತೀಂದ್ರ ಸಿದ್ದರಾಮಯ್ಯ ಹೇಳಿಕೆ: ಡಿಸಿಎಂ ಡಿ.ಕೆ ಶಿವಕುಮಾರ್ ಪ್ರತಿಕ್ರಿಯಿಸಿದ್ದು ಹೀಗೆ..
ಬೆಂಗಳೂರು,ಜನವರಿ,17,2024(www.justkannada.in): ಲೋಕಸಭೆ ಚುನಾವಣೆಯಲ್ಲಿ ರಾಜ್ಯದಲ್ಲಿ ಹೆಚ್ಚು ಸ್ಥಾನ ಗೆದ್ದರೇ ಸಿದ್ದರಾಮಯ್ಯ 5 ವರ್ಷಗಳ ಕಾಲವೂ ಸಿಎಂ ಆಗಿರಲಿದ್ದಾರೆ ಎಂಬ ಮಾಜಿ ಶಾಸಕ ಯತೀಂದ್ರ ಸಿದ್ದರಾಮಯ್ಯ ಹೇಳಿಕೆ ಕುರಿತು ಡಿಸಿಎಂ ಡಿ.ಕೆ ಶಿವಕುಮಾರ್ ಪ್ರತಿಕ್ರಿಯಿಸಿದ್ದಾರೆ.
ಈ ಕುರಿತು ಮಾತನಾಡಿರುವ ಡಿಸಿಎಂ ಡಿಕೆ ಶಿವಕುಮಾರ್, ಯತೀಂದ್ರ ಸಿದ್ದರಾಮಯ್ಯ ಆಸೆ ಪಡುವುದರಲ್ಲಿ ತಪ್ಪೇನಿದೆ. ಜನರ ಮುಂದೆ ಯತೀದ್ರ ಆ ರೀತಿ ಮಾತನಾಡದ್ದಾರೆ. ನಾನು ಕೂಡ ಜನರ ಭಾವನೆಗೆ ತಕ್ಕ ಹಾಗೆ ಮಾತನಾಡುತ್ತೇನೆ. ಇದನ್ನ ಬೇರೆ ಅರ್ಥದಲ್ಲಿ ಬಿಂಬಿಸುವುದು ಬೇಡ ಎಂದರು.
ಯತೀಂದ್ರ ಸೂಕ್ಷ್ಮ ವ್ಯಕ್ತಿ. ಉದ್ಭವವಾಗುತ್ತಿರುವ ನಾಯಕ. ಸಿದ್ದರಾಮಯ್ಯ ನಮ್ಮ ಸಿಎಂ , ನಾನು ಕೆಪಿಸಿಸಿ ಅಧ್ಯಕ್ಷ . ನಾವಿಬ್ಬರೂ ಒಟ್ಟಿಗೆ ಸೇರಿ ಚುನಾವಣೆ ಎದುರಿಸುತ್ತೇವೆ. ಸಿದ್ದರಾಮಯ್ಯ ಅವರ ನಾಯಕತ್ವದಲ್ಲಿ ಚುನಾವಣೆ ನಡೆಯುತ್ತದೆ ಎಂದು ಡಿಸಿಎಂ ಡಿ.ಕೆ ಶಿವಕುಮಾರ್ ತಿಳಿಸಿದರು.
ENGLISH SUMMARY...
- DCM DK Shivakumar responds to Yatindra Siddaramaiah's statement about Siddaramaiah remaining CM for 5 years if he wins more seats
- DCM DK Shivakumar says there is nothing wrong in wishing and that Yatindra is a sensitive person and an emerging leader
- Election will be held under Siddaramaiah's leadership
- Other news on Ayodhya Ram Mandir inauguration and BJP's involvement in Mysore sandal fake soap case
Key words: Yatindra Siddaramaiah- statement -about -5 years –CM-DCM -DK Shivakumar