HomeBreaking NewsLatest NewsPoliticsSportsCrimeCinema

ಪರಿಷತ್‌ ಚುನಾವಣೆ : ಡಾ.ಯತೀಂದ್ರ ಅವಿರೋಧ ಅಭ್ಯರ್ಥಿ. ಅಧಿಕೃತ ಪಟ್ಟಿ ಬಿಡುಗಡೆ ಸದ್ಯದಲ್ಲೆ.

01:09 PM May 31, 2024 IST | mahesh

The Congress High Command has cleared 7 candidates, Yatindra’s candidature was cleared by CM Siddaramaiah, DCM D K Shivakumar and party high command.

 

ಬೆಂಗಳೂರು, ಮೇ.31,2024: (www.justkannada.in news ) ಇದೇ ಜೂನ್ 13 ರಂದು ನಡೆಯಲಿರುವ ವಿಧಾನಸಭೆಯಿಂದ ವಿಧಾನಪರಿಷತ್‌ ಗೆ ಹನ್ನೊಂದು ಮಂದಿ ಆಯ್ಕೆ ಸಂಬಂಧದ  ಚುನಾವಣೆಗೆ ಕಾಂಗ್ರೆಸ್  ನ ಏಳು ಸ್ಥಾನಗಳ ಪೈಕಿ  ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪುತ್ರ ಯತೀಂದ್ರ ಅವಿರೋಧ ಅಭ್ಯರ್ಥಿಯಾಗಿದ್ದಾರೆ.

ಯತೀಂದ್ರ ಅವರ ಉಮೇದುವಾರಿಕೆಯನ್ನು ಗುರುವಾರ ನವದೆಹಲಿಯಲ್ಲಿ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿಕೆ ಶಿವಕುಮಾರ್ ಮತ್ತು ಹಿರಿಯ ನಾಯಕ ರಾಹುಲ್ ಗಾಂಧಿ ಸೇರಿದಂತೆ ಪಕ್ಷದ ಹೈಕಮಾಂಡ್ ಅನುಮೋದಿಸಿದೆ. ಉಳಿದ ಆರು ಸ್ಥಾನಗಳಿಗೆ ಪೈಪೋಟಿ ಇದ್ದು ಅಭ್ಯರ್ಥಿಗಳ ಆಯ್ಕೆ ನಡೆಯಬೇಕಿದೆ.

ಏಳು ಸ್ಥಾನಗಳಿಗೆ ಸಂಬಂಧಿಸಿದಂತೆ ಹೈಕಮಾಂಡ್‌ಗೆ ಸಿಎಂ ಹಾಗೂ ಡಿಸಿಎಂ ಅಭ್ಯರ್ಥಿಗಳ ಅಂತಿಮ ಪಟ್ಟಿ ಸಲ್ಲಿಸಿದ್ದು. ಇಂದು ಸಂಜೆ ಅಥವಾ ನಾಳೆ ಅಧಿಕೃತವಾಗಿ ಪಟ್ಟಿ ಬಿಡುಗಡೆಯಾಗಲಿದೆ ಎಂದು ಕಾಂಗ್ರೆಸ್‌ ಉನ್ನತ ಮೂಲಗಳು ತಿಳಿಸಿವೆ.

ಹೈಕಮಾಮಡ್‌ ಜತೆಗೆ ಸಾಕಷ್ಟು ಚರ್ಚೆ ಬಳಿಕ 65 ಮಂದಿಯ ಪಟ್ಟಿಯನ್ನು ಶಾರ್ಟ್‌ಲಿಸ್ಟ್ ಮಾಡಲಾಗಿತ್ತು. ಈ ಪಟ್ಟಿಯನ್ನೇ ದಿಲ್ಲಿ ನಾಯಕರಿಗೆ ಸಲ್ಲಿಸಲಾಗಿದೆ. ಡಾ. ಯತೀಂದ್ರ ವಿಚಾರದಲ್ಲಿ ಈಗಾಗಲೇ ಮಾತು ಕೊಟ್ಟಿರುವ ಹೈಕಮಾಂಡ್ ನಿರ್ಧಾರ ಕೈಗೊಳ್ಳುವುದು ಬಹುತೇಕ ಖಚಿತ.

ಕರಾವಳಿ, ಮಧ್ಯ ಮತ್ತು ಕಲ್ಯಾಣ ಕರ್ನಾಟಕ ಪ್ರದೇಶಗಳಿಂದ ಅನೇಕ ಆಕಾಂಕ್ಷಿಗಳಿದ್ದು, ಮಂಗಳೂರಿಂದ 21 ಮಂದಿ ಮತ್ತು ಚಿಕ್ಕಮಗಳೂರಿಂದ  ಒಂಬತ್ತು ಮಂದಿ ಆಕಾಂಕ್ಷಿಗಳಿದ್ದಾರೆ.  ಈ ಪೈಕಿ ಯಾರಿಗೆ ಅದೃಷ್ಠ ಒಲಿಯುವೋದು ಕಾದು ನೋಡಬೇಕಿದೆ.

key words: Congress High Command, Yatindra’s candidature was cleared, CM Siddaramaiah, DCM D K Shivakumar

SUMMARY:

The Congress High Command has cleared 7 candidates for the June 13 polls for the election of 11 MLCs from the assembly, with Chief Minister Siddaramaiah’s son Dr. Yatindra emerging as an undisputed nominee. Yatindra’s candidature was cleared by CM Siddaramaiah, DCM D K Shivakumar and party high command, including senior leader Rahul Gandhi, in New Delhi.

Tags :
CM SiddaramaiahCongress High CommandDCM D.K. ShivakumarYatindra’s candidature was cleared
Next Article