For the best experience, open
https://m.justkannada.in
on your mobile browser.

ಸೆಲ್ಫಿ ತೆಗೆದುಕೊಳ್ಳುವಾಗ ಕಾಲುಜಾರಿ ಬಿದ್ದು ಯುವಕ ಸಾವು

05:15 PM Jun 24, 2024 IST | prashanth
ಸೆಲ್ಫಿ ತೆಗೆದುಕೊಳ್ಳುವಾಗ ಕಾಲುಜಾರಿ ಬಿದ್ದು ಯುವಕ ಸಾವು

ಶಿವಮೊಗ್ಗ, ಜೂನ್ 24,2024 (www.justkannada.in):  ಸೆಲ್ಫಿ, ರೀಲ್ಸ್ ಹುಚ್ಚಿಗೆ ಹಲವರು ಬಲಿಯಾದ ಘಟನೆಗಳು ನಡೆದಿದೆ, ಅಂತೆಯೇ ಇಲ್ಲೊಬ್ಬ ಯುವಕ ಸೆಲ್ಪಿ ಕ್ಲಿಕ್ಲಿಸಿಕೊಳ್ಳಲು ಹೋಗಿ  ಫಾಲ್ಸ್​ನಲ್ಲಿ ಕಾಲು ಜಾರಿ ಬಿದ್ದು ಸಾವನ್ನಪ್ಪಿದ ಘಟನೆ ನಡೆದಿದೆ.

ಶಿವಮೊಗ್ಗ ಜಿಲ್ಲೆ ಹೊಸನಗರ ತಾಲೂಕಿನ ಯಡೂರು ಬಳಿಯ ಅಬ್ಬಿ ಫಾಲ್ಸ್​ನಲ್ಲಿ ಈ ದುರ್ಘಟನೆ ನಡೆದಿದೆ. ಬಳ್ಳಾರಿ ಮೂಲದ ವಿನೋದ್(26) ಮೃತಪಟ್ಟ ಯುವಕ. ವಿನೋದ್ 12 ಜನರ ಗೆಳೆಯರೊಂದಿಗೆ ಬೆಂಗಳೂರಿನಿಂದ ಪ್ರವಾಸಕ್ಕೆ ಬಂದಿದ್ದ.

ಈ ನಡುವೆ ವಿನೋದ್ (26)  ಅಬ್ಬಿಫಾಲ್ಸ್ ಬಳಿ ಫೋಟೋ ಕ್ಲಿಕ್ಕಿಸಿಕೊಳ್ಳುವಾಗ ಕಾಲು ಜಾರಿದೆ. ಪರಿಣಾಮ ಜಲಪಾತದೊಳಗೆ ಬಿದ್ದಿದ್ದಾನೆ. ಸದ್ಯ ಸ್ಥಳಕ್ಕೆ ಅಗ್ನಿಶಾಮಕ ದಳ ಸಿಬ್ಬಂದಿ ದೌಡಾಯಿಸಿದ್ದು, ವಿನೋದ್​ ಮೃತದೇಹಕ್ಕಾಗಿ ಹುಡುಕಾಟ ನಡೆಸಿದ್ದಾರೆ.

Key words: young man- died – selfie- shimoga

Tags :

.