HomeBreaking NewsLatest NewsPoliticsSportsCrimeCinema

ಕಲುಷಿತ ನೀರು ಸೇವಿಸಿ ಯುವಕ ಸಾವು ಪ್ರಕರಣ: ಪರಿಹಾರ ನೀಡುವಂತೆ ಸರ್ಕಾರಕ್ಕೆ ಆಗ್ರಹ.

05:40 PM May 21, 2024 IST | prashanth

ಮೈಸೂರು,ಮೇ,21,2024 (www.justkannada.in): ಮೈಸೂರಿನ ಕೆ ಸಾಲುಂಡಿ ಗ್ರಾಮದಲ್ಲಿ ಕಲುಷಿತ ನೀರು ಸೇವಿಸಿ ಯುವಕ ಕನಕರಾಜ್(2) ಸಾವನ್ನಪ್ಪಿದ್ದು ಸೂಕ್ತ ಪರಿಹಾರ ನೀಡುವಂತೆ ಸರ್ಕಾರಕ್ಕೆ ಕುಟುಂಬಸ್ಥರು ಆಗ್ರಹಿಸಿದ್ದಾರೆ.

ಕಲುಷಿತ ನೀರು ಸೇವಿಸಿ ಕನಕರಾಜ್  ಸಾವು ಹಿನ್ನೆಲೆಯಲ್ಲಿ ಕನಕರಾಜ್ ನಿವಾಸದಲ್ಲಿ ಶೋಕಸಾಗರ ಮಡುಗಟ್ಟಿದ್ದು, ಅತ್ತೆ ಜವನಮ್ಮ ಕಣ್ಣೀರು ಸುರಿಸಿದ್ದಾರೆ. ನಮ್ಮೂರಿನಲ್ಲಿ ಕನಕರಾಜ್ ಗೆ ಮೊದಲು ವಾಂತಿ ಭೇದಿ ಆಗಿದ್ದು. ತದ ನಂತರ ಗ್ರಾಮದ ಹಲವರಿಗೆ ಬಂದಿದೆ. ಮೊನ್ನೆಯೇ ಕನಕರಾಜುಗೆ ವಾಂತಿ ಭೇದಿ ಆಗಿತ್ತು. ಆ ವೇಳೇ ಆಸ್ಪತ್ರೆಗೆ ಹೋದಾಗ ದುಡ್ಡು ಕೇಳಿದ್ದಾರೆ. ದುಡ್ಡು ಇಲ್ಲ ಅಂತ ವಾಪಾಸ್ ಕಳುಹಿಸಿದರು.

ನಿನ್ನೆ ಮತ್ತೆ ಆಸ್ಪತ್ರೆಗೆ ಹೋಗಿ ಆಸ್ಪತ್ರೆಗೆ ಅಡ್ಮಿಟ್ ಆಗಿದ್ದ. ಅವರ ತಂದೆ ಕೂಡ ಕುಡಿದು ತೀರಿ ಹೋಗಿದ್ದಾರ. ಕನಕರಾಜ್ ಮತ್ತೆ ಒಬ್ಬ ಮಗಳು ಇದ್ದಾರೆ ಆಕೆಗೂ ಮದುವೆ ಆಗಿದೆ. ಈಗ ಇದ್ದೊಬ್ಬ ಇವನು ಈಗ ಇಲ್ಲ. ಚರಂಡಿ ನೀರು ಕುಡಿಯೋ ನೀರಿಗೆ ಸೇರಿ ಈ ರೀತಿ ಆಗಿದೆ. ಸರ್ಕಾರ ನಮಗೆ ಪರಿಹಾರ ಕೊಡಲಿ ಎಂದು ಕನಕರಾಜ್ ಅತ್ತೆ ಜವನಮ್ಮ ಆಗ್ರಹಿಸಿದ್ದಾರೆ.

Key words: Youth, dies, contaminated, water

Tags :
Youth-dies -contaminated water- government- compensation.
Next Article