HomeBreaking NewsLatest NewsPoliticsSportsCrimeCinema

ಕೊನೆಗೂ ಜಿ.ಪಂ‌ ಮತ್ತು ತಾ.ಪಂ ಮೀಸಲಾತಿ ಪ್ರಕಟ: ಮೈಸೂರು ಜಿಲ್ಲೆಯ ವಿವರ ಹೀಗಿದೆ..

12:07 PM Dec 22, 2023 IST | prashanth

ಬೆಂಗಳೂರು,ಡಿಸೆಂಬರ್,22,2023(www.justkannada.in):  ರಾಜ್ಯದ ಜಿಲ್ಲಾ ಪಂ‌ಚಾಯತ್ ಗಳು ಮತ್ತು ತಾಲ್ಲೂಕು ಪಂಚಾಯಿತಿಗಳಿಗೆ ಚುನಾವಣೆ ನಡೆಸಲು ಹೈಕೋರ್ಟ್ ಗಡುವು ನೀಡಿದ ಬೆನ್ನಲ್ಲೆ ರಾಜ್ಯ ಸರ್ಕಾರ ಮೀಸಲಾತಿ ನಿಗದಿಪಡಿಸಿ ಆದೇಶ ಹೊರಡಿಸಿದೆ.

ರಾಜ್ಯದ ಎಲ್ಲಾ ಜಿಲ್ಲಾ ಪಂ‌ಚಾಯತ್ ಗಳು ಮತ್ತು ತಾಲ್ಲೂಕು ಪಂಚಾಯಿತಿಗಳು ಕಳೆದ ಎರಡು ಮೂರು ವರ್ಷಗಳಿಂದ ಚುನಾಯಿತ ಸದಸ್ಯರಿಲ್ಲದೆ ಹಾಗೆಯೇ ಇವೆ. ಇದೀಗ ಕೊಡಗು ಹೊರತುಪಡೆಸಿ ರಾಜ್ಯದ 30 ಕ್ಷೇತ್ರಗಳ ಮೀಸಲಾತಿ ನಿಗದಿಪಡಿಸಿ  ರಾಜ್ಯ ಪತ್ರದಲ್ಲಿ ಸರ್ಕಾರ ಪ್ರಕಟಣೆ ಹೊರಡಿಸಿದೆ.

ಆಯಾ ಜಿಲ್ಲೆಯಲ್ಲಿರುವ ಜಿ.ಪಂ ಮತ್ತು ತಾ.ಪಂ ಕ್ಷೇತ್ರಗಳಿಗೆ ಅನುಗುಣವಾಗಿ ಮೀಸಲಾತಿ ನಿಗದಿ ಮಾಡಲಾಗಿದೆ.

ಮೈಸೂರು  ಜಿಲ್ಲಾಪಂಚಾಯತಿಯಲ್ಲಿ  ಒಟ್ಟು ಸ್ಥಾನ 46 ಸ್ಥಾನಗಳಲ್ಲಿ ಎಸ್ಸಿ10, ಎಸ್ಟಿ 7, ಬಿಸಿಎಂ(ಎ) 5, ಬಿಸಿಎಂ(ಬಿ) 1 ಮತ್ತು ಸಾಮಾನ್ಯ 22.

ಮಂಡ್ಯ ಜಿ.ಪಂ ಒಟ್ಟು ಸ್ಥಾನ 40 ಎಸ್ಸಿ 6,ಎಸ್ಟಿ 1, ಬಿಸಿಎಂ(ಎ) 10 ಬಿಸಿಎಂ(ಬಿ) 3 ಮತ್ತು ಸಾಮಾನ್ಯ 20.

ಚಾಮರಾಜನಗರ ಒಟ್ಟು ಜಿ.ಪಂ ಸ್ಥಾನ ಎಸ್ಸಿ 7 ಎಸ್ಟಿ 3,ಬಿಸಿಎಂ(ಎ) 3,ಬಿಸಿಎಂ(ಬಿ) 1 ಮತ್ತು ಸಾಮಾನ್ಯ 14.

ಸರಗೂರು,ಕೆಆರ್ ನಗರ, ಸಾಲಿಗ್ರಾಮ, ಎಚ್.ಡಿ ಕೋಟೆ, ಪಿರಿಯಾಪಟ್ಟಣ, ಹುಣಸೂರು, ಮೈಸೂರು, ಟಿ.ನರಸಿಪುರ ಮತ್ತು ನಂಜನಗೂಡು ತಾ.ಪಂ ಗಳಿಗೂ ಮೀಸಲಾತಿ ಪ್ರಕಟವಾಗಿದೆ. ಮೀಸಲಾತಿ ಪ್ರಕಟವಾಗುತ್ತಿದಂತೆ ಗ್ರಾಮಾಂತರ ಪ್ರದೇಶಗಳಲ್ಲಿ ರಾಜಕೀಯ ಚಟುವಟಿಕೆ ಗರಿಗೆದರಿದೆ.

Key words: ZP-TP-Reservation- announced- Mysore district- details

Tags :
ZP-TP-Reservation- announced- Mysore district- details
Next Article