HomeBreaking NewsLatest NewsPoliticsSportsCrimeCinema

ನಾಳೆ ಮೈಸೂರು ಬಾರ್ ಅಸೋಸಿಯೇಷನ್ ನಲ್ಲಿ ಪುಸ್ತಕ ಬಿಡುಗಡೆ ಕಾರ್ಯಕ್ರಮ.

06:22 PM Jun 11, 2024 IST | prashanth

ಮೈಸೂರು,ಜೂನ್,11,2024 (www.justkannada.in): ದಿ ಮೈಸೂರು ಬಾರ್ ಅಸೋಸಿಯೇಷನ್ ಮತ್ತು ಲಾಯರ್ಸ್ ಲಾ ಬುಕ್  ಬೆಂಗಳೂರು ವತಿಯಿಂದ ನಾಳೆ ಪುಸ್ತಕ ಬಿಡುಗಡೆ ಕಾರ್ಯಕ್ರಮವನ್ನ ಆಯೋಜಿಸಲಾಗಿದೆ.

ವಕೀಲ ಬಿ. ಎಸ್ ಪ್ರಶಾಂತ್ ಮತ್ತು   ಮಾಜಿ ಡಿಜಿಪಿ, ಹಾಗೂ ಐಪಿಎಸ್ ಅಧಿಕಾರಿ ಡಾ. ಡಿ.ವಿ ಗುರುಪ್ರಸಾದ್ ಅವರ  ‘ಭಾರತೀಯ ನಾಗರೀಕ ಸುರಕ್ಷಾ ಸಂಹಿತ 2023’,  ‘ಭಾರತೀಯ ನ್ಯಾಯ ಸಂಹಿತೆ 2023’ ಮತ್ತು ‘ಭಾರತೀಯ ಸಾಕ್ಷ್ಯ ಅಧಿನಿಯಮ 2023’ ಎಂಬ ಪುಸ್ತಕವನ್ನ  ಮೈಸೂರಿನ ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶರಾದ ರವೀಂದ್ರ ಹೆಗ್ಡೆ ಅವರು ಬಿಡುಗಡೆಗೊಳಿಸಲಿದ್ದಾರೆ.

ಮೈಸೂರು ಬಾರ್ ಅಸೋಸಿಯೇಷನ್ ನಲ್ಲಿ ನಾಳೆ ಮಧ್ಯಾಹ್ನ 1.45ಕ್ಕೆ ಕಾರ್ಯಕ್ರಮ ನಡೆಯಲಿದ್ದು ಗೌರವ ಅತಿಥಿಗಳಾಗಿ ಲಾ ಗೈಡ್ ಸಂಪಾದಕ ಹೆಚ್.ಎನ್ ವೆಂಕಟೇಶ್,  ಮೈಸೂರು ಬಾರ್ ಅಸೋಸಿಯೇಷನ್ ನ ಅಧ್ಯಕ್ಷ ಎಸ್. ಲೋಕೇಶ್ ಆಗಮಿಸಲಿದ್ದಾರೆ.

ಮೈಸೂರು ಬಾರ್ ಅಸೋಸಿಯೇಷನ್  ನ ಕಾರ್ಯದರ್ಶಿ ಎ.ಜಿ ಸುಧೀರ್, ಉಪಾಧ್ಯಕ್ಷ ಎಂ.ವಿ ಚಂದ್ರಶೇಖರ, ಜಂಟಿ ಕಾರ್ಯದರ್ಶಿ ಚರಣ್ ರಾಜ್ ಸೇರಿ ಹಲವರು ಉಪಸ್ಥಿತರಿರಲಿದ್ದಾರೆ.

Key words: Book, release, Mysore Bar Association

Tags :
Book –release-eventMysore Bar Association.Tomorrow
Next Article