HomeBreaking NewsLatest NewsPoliticsSportsCrimeCinema

ಡಿಸಿಎಂ ಡಿ.ಕೆ ಶಿವಕುಮಾರ್ ಗೆ ಸಿಬಿಐ ನೋಟಿಸ್.

11:07 AM Jan 01, 2024 IST | prashanth

ನವದೆಹಲಿ, ಜನವರಿ,1,2024(www.justkannada.in):   ಡಿಸಿಎಂ ಡಿಕೆ ಶಿವಕುಮಾರ್  ವಿರುದ್ಧದ ಅಕ್ರಮ ಆಸ್ತಿ ಪ್ರಕರಣದ ತನಿಖೆ ನಡೆಸುತ್ತಿರುವ ಸಿಬಿಐ ಇದೀಗ ಕೇರಳ ಮೂಲದ ಜೈಹಿಂದ್ ಖಾಸಗಿ ವಾಹಿನಿಯಲ್ಲಿ ಹೂಡಿಕೆ ಮಾಡಿರುವ ಬಗ್ಗೆ ವಿವರಗಳನ್ನ ನೀಡುವಂತೆ ಡಿ.ಕೆ ಶಿವಕುಮಾರ್ ಗೆ ನೋಟಿಸ್ ನೀಡಿದೆ.

ಕೇರಳ ಮೂಲದ ಜೈಹಿಂದ್ ಖಾಸಗಿ ಚಾನಲ್ ನಲ್ಲಿ ಹೂಡಿಕೆ ಬಗ್ಗೆ ಮಾಹಿತಿ ನೀಡುವಂತೆ ಹಾಗೂ ಹೂಡಿಕೆಗೆ ಹಾಕಲಾದ ಹಣದ ಮೂಲದ ಬಗ್ಗೆ ಮಾಹಿತಿ ನೀಡುವಂತೆ ಸಿಸಿಬಿ ಡಿಸಿಎಂ ಡಿಕೆ ಶಿವಕುಮಾರ್​​​ಗೆ ಹಾಗೂ ಪತ್ನಿ ಉಷಾ ಶಿವಕುಮಾರ್​ ಸೇರಿದಂತೆ ಬಂಡವಾಳ ಹೂಡಿರುವ 30ಕ್ಕೂ ಹೆಚ್ಚು ಜನರಿಗೆ ನೋಟಿಸ್​ ನೀಡಿದೆ.

ಜೈಹಿಂದ್ ಕಮ್ಯುನಿಕೇಷನ್ಸ್ ಪ್ರೈವೇಟ್ ಲಿಮಿಟೆಡ್‌ ನ ವ್ಯವಸ್ಥಾಪಕ ನಿರ್ದೇಶಕರಿಗೂ ಈ ಬಗ್ಗೆ ಸಿಬಿಐ ನೋಟಿಸ್ ನೀಡಿದೆ.  2024ರ ಜನವರಿ 11ರಂದು ತನಿಖಾಧಿಕಾರಿ ಕೋರಿದ ಎಲ್ಲಾ ಅಗತ್ಯ ದಾಖಲೆಗಳೊಂದಿಗೆ ತನ್ನ ಮುಂದೆ ಹಾಜರಾಗುವಂತೆ ತಿಳಿಸಿದೆ. ಇದಲ್ಲದೆ ಸಿಆರ್​ಪಿಸಿ 91ರಡಿ ಡಿಸಿಎಂ ಡಿಕೆ ಶಿವಕುಮಾರ್ ಸೇರಿದಂತೆ 30ಕ್ಕೂ ಹೆಚ್ಚು ಜನರಿಗೆ ನೋಟಿಸ್​ ನೀಡಲಾಗಿದೆ.

Key words: CBI- notice - DCM DK Shivakumar -provide -information -investment - private channel.

Tags :
CBI- notice - DCM DK Shivakumar -provide -information -investmentPrivate channel
Next Article