HomeBreaking NewsLatest NewsPoliticsSportsCrimeCinema

ನನ್ನ ಪ್ರಕಾರ ಹಾಲಿನ ದರ ಇನ್ನಷ್ಟು ಹೆಚ್ಚಬೇಕಿತ್ತು: ಡಿಸಿಎಂ ಡಿಕೆ ಶಿವಕುಮಾರ್

12:29 PM Jun 26, 2024 IST | prashanth

ಬೆಂಗಳೂರು,ಜೂನ್,26,2024 (www.justkannada.in): ಹಾಲಿನ ದರ 2 ರೂ ಹೆಚ್ಚಳ ಮಾಡಿರುವುದನ್ನ ಈಗಾಗಲೇ ಡಿಸಿಎಂ ಡಿಕೆ ಶಿವಕುಮಾರ್ ಸಮರ್ಥಸಿಕೊಂಡಿದ್ದು ಅಲ್ಲದೆ ನನ್ನ ಪ್ರಕಾರ ಹಾಲಿನ ದರ ಇನ್ನಷ್ಟು ಹೆಚ್ಚಬೇಕಿತ್ತು ಎಂದು ಹೇಳಿಕೆ ನೀಡಿದ್ದಾರೆ.

ಹಾಲಿನ ದರ ಏರಿಕೆಗೆ ಬಿಜೆಪಿ ಮತ್ತು ರಾಜ್ಯದ ಜನತೆ  ವಿರೋಧ ವ್ಯಕ್ತಪಡಿಸಿದ್ದು ಈ ಕುರಿತು ಪ್ರತಿಕ್ರಿಯಿಸಿರುವ ಡಿಸಿಎಂ ಡಿ.ಕೆ ಶಿವಕುಮಾರ್,  ಬಿಜೆಪಿಯವರು ರೈತ ವಿರೋಧಿಗಳು. ಜಾಸ್ತಿಯಾಗಿರುವ 2 ರೂ ರೈತರಿಗೆ ತಲುಪುತ್ತೆ  ರೈತರಿಗೆ ಹಣ ತಲುಪಲ್ಲ ಅನ್ನೋದನ್ನ ಯಾರು ಹೇಳಿದ್ರು?   ಕೆಎಂಎಫ್ ಉಳಿದರೇ ರೈತರು ಉಳಿದಂತೆ ಎಂದಿದ್ದಾರೆ.

ರೈತರು ಸಾಲದಿಂದ ಹಸುಗಳನ್ನ ಮಾರಾಟ ಮಾಡುತ್ತಿದ್ದಾರೆ.  ಬಿಜೆಪಿಯವರ ರೈತ ವಿರೋಧಿ ಧೋರಣೆ ಎದ್ದು ಕಾಣುತ್ತೆ ಬೇರ ರಾಜ್ಯದಲ್ಲಿ ಹಾಲಿನ ದರ ಎಷ್ಟಿದೆ ನೋಡಲಿ.  ಅ ಮೇಲೆ ಮಾತನಾಡಲಿ ಎಂದು ಬಿಜೆಪಿಗೆ ಟಾಂಗ್ ಕೊಟ್ಟರು.

ನನ್ನ ಪ್ರಕಾರ ಹಾಲಿನ ದರ ಇನ್ನಷ್ಟು ಹೆಚ್ಚಬೇಕಿತ್ತು.  ಕೆಎಂಎಫ್ ಅಂದರೆ ರೈತರ ಒಕ್ಕೂಟ,  ನನ್ನ ಪ್ರಕಾರ ಇನ್ನೂ ಹಾಲಿನ‌ ದರ ಜಾಸ್ತಿ ಮಾಡಬೇಕು. ಯಾರು ಏನು ಬೇಕಾದರೂ ಟೀಕೆ ಮಾಡಿಕೊಳ್ಳಲಿ ಎಂದು ಹೇಳಿದರು.

Key words: milk price, rise, DCM, DK Shivakumar

Tags :
DCMDK Shivakumarmilk price –rise
Next Article