HomeBreaking NewsLatest NewsPoliticsSportsCrimeCinema

MYSORE UNIVERSITY: ‌ಪ್ರಸಕ್ತ ಸಾಲಿನಲ್ಲಿ 80.35 ಕೋಟಿ ರೂ. ಕೊರತೆ ಬಜೆಟ್.!

03:33 PM Jun 28, 2024 IST | mahesh

 

ಮೈಸೂರು, June 28,2024: (www.justkannada.in news )ರಾಜ್ಯದ ಪ್ರತಿಷ್ಠಿತ ವಿವಿಗಳಲ್ಲಿ ಒಂದಾದ ಮೈಸೂರು ವಿಶ್ವವಿದ್ಯಾನಿಲಯ ಪ್ರಸಕ್ತ ಸಾಲಿನಲ್ಲಿ 80.35 ಕೋಟಿ ರೂ. ಕೊರತೆ ಆಯವ್ಯ ಮಂಡಿಸಿತು.

ವಿವಿಯ ಕ್ರಾಫರ್ಡ್‌ಭವನದಲ್ಲಿ ಶುಕ್ರವಾರ ಕುಲಪತಿ ಪ್ರೊ.ಎನ್.ಕೆ.ಲೋಕನಾಥ್ ಅಧ್ಯಕ್ಷತೆಯಲ್ಲಿ ನಡೆದ ಶಿಕ್ಷಣ ಮಂಡಳಿಯ ಮೊದಲನೇ ಸಭೆಯಲ್ಲಿ ಹಣಕಾಸು ಅಧಿಕಾರಿ ಕೆ.ಎಸ್.ರೇಖಾ ಆಯವ್ಯಯ ಮಂಡಿಸಿದರು.

ನಿರೀಕ್ಷಿತ ಆದಾಯಕ್ಕಿಂತ ಸಿಬ್ಬಂದಿ ವೇತನ, ಪಿಂಚಣಿ,ನಿರ್ವಹಣೆ ಸೇರಿ ಶೈಕ್ಷಣಿಕ ಕಾರ್ಯಕ್ರಮಗಳಿಗೆ ಹೆಚ್ಚು ವೆಚ್ಚವಾಗುತ್ತಿರುವ ಕಾರಣ ಆದಾಯಕ್ಕಿಂತ ಖರ್ಚು ಜಾಸ್ತಿಯಾಗಿ ಕೊರತೆ ಉಂಟಾಗಿದೆ.

ಪ್ರಸಕ್ತ ಸಾಲಿನಲ್ಲಿ  ವಿಶ್ವವಿದ್ಯಾನಿಲಯದ ನಿರೀಕ್ಷಿತ ಆದಾಯ 277.39 ಕೋಟಿ ರೂ. ಆದರೆ, ನಿರೀಕ್ಷಿತ ವೆಚ್ಚ 357.74 ಕೋಟಿ ರೂ.ಆಗಿದ್ದು, ಪರಿಣಾಮ ಒಟ್ಟು 80.35 ಕೋಟಿ ರೂ.ಕೊರತೆ ಎದುರಾಗಿದೆ.

ವಿವಿಯು 108 ವರ್ಷಗಳನ್ನು ಪೂರೈಸಿ 109 ಕ್ಕೆ ಕಾಲಿರಿಸಿದ್ದು, 1852 ಪಿಂಚಣಿದಾರರಿದ್ದು, 2024-25 ನೇ ಸಾಲಿನಲ್ಲಿ 20 ಬೋಧಕರು, 30 ಬೋಧಕೇತರರು ನಿವೃತ್ತರಾಗಲಿದ್ದು, ಅಂದಾಜು 120  ಕೋಟಿ ರೂ. ಪಿಂಚಣಿ ಜಮಾಗೆ ಬೇಕಾಗಿದೆ.

ಆದರೆ, ರಾಜ್ಯಸರ್ಕಾರದಿಂದ 2022-23, 2023-24 ಮತ್ತು 2024-25 ನೇ ಸಾಲಿನಲ್ಲಿ  ಪಿಂಚಣಿ ಅನುದಾನವಾಗಿ ಕ್ರಮವಾಗಿ 56 ಕೋಟಿ, 63 ಕೋಟಿ ಮತ್ತು 70 ಕೋಟಿ ಕಡಿಮೆ ನೀಡಿದ ಕಾರಣ ಪ್ರಸಕ್ತ (2024-25ನೇ)  ಸಾಲಿಗೆ 80.35  ಕೋಟಿ ರೂ. ಕೊರತೆ ಎದುರಾಗಿದೆ.

2024-25 ನೇ ಸಾಲಿನ ವೆಚ್ಚಗಳಲ್ಲಿ  ಮಿತವ್ಯಯ ಸಾಧಿಸಲು ಮತ್ತು ಅನಗತ್ಯ ವೆಚ್ಚಗಳನ್ನು ಹೊರತುಪಡಿಸಿ ಉಳಿದ ವೆಚ್ಚಗಳನ್ನು ನಿಯಂತ್ರಿಸಲು ಸೂಕ್ತ ಕ್ರಮಕೈಗೊಳ್ಳಲಾಗುವುದು ಎಂದು ವಿವರಿಸಿದರು.

ವಿವಿಯ 18 ಖಾತೆಗಳ (ಪ್ರಾಯೋಜಿತ ಕಾರ್ಯಕ್ರಮಗಳು ಮತ್ತು ಇನ್ನಿತರ ಖಾತೆಗಳ ಒಳಗೊಂಡಂತೆ)ಸ್ವೀಕೃತಿ, ಬಡ್ಡಿ ಮೊತ್ತ ಸೇರಿ ಆದಾಯ 61.94 ಕೋಟಿ ಮತ್ತು 47.66 ಕೋಟಿ ರೂ.ಗಳನ್ನು ವೆಚ್ಚಕ್ಕೆ ನಿಗಧಿಪಡಿಸಲಾಗಿದೆ. ಈ ಖಾತೆಗಳ ಆದಾಯಕ್ಕಾಗಲಿ ಮತ್ತು ವೆಚ್ಚಗಳಿಗೆ ವಿವಿಯು ಆರ್ಥಿಕ ಹೊರೆಗೆ ಒಳಪಡುವುದಿಲ್ಲ ಎಂದು ಹೇಳಿದರು.

ವಿವಿಯ ಕ್ರಾಫರ್ಡ್‌ಭವನದಲ್ಲಿ ಶುಕ್ರವಾರ ಕುಲಪತಿ ಪ್ರೊ.ಎನ್.ಕೆ.ಲೋಕನಾಥ್ ಅಧ್ಯಕ್ಷತೆಯಲ್ಲಿ ನಡೆದ ಶಿಕ್ಷಣ ಮಂಡಳಿಯ ಮೊದಲನೇ ಸಭೆ

ಕ್ಯಾಂಪಸ್‌ ನಲ್ಲಿ ಬೀರ್‌ ಬಾಟಲ್‌ :

ವಿವಿಯ ನಿರ್ವಹಣೆಗೆ 21 ಕೋಟಿ ರೂ.ಮೀಸಲಿಟ್ಟಿರುವುದರಿಂದ ಕ್ಯಾಂಪಸ್‌ನ್ನು ಸರಿಯಾಗಿ ನಿರ್ವಹಣೆ ಮಾಡಬೇಕು. ಕೆಲವೆಡೆ ಬೀರ್ ಬಾಟಲ್‌ಗಳು, ನೀರಿನ ಬಾಟಲ್‌ ,ಪ್ಲಾಸ್ಟಿಕ್‌ ಬಿದ್ದಿರುತ್ತದೆ. ಗಂಗೋತ್ರಿ ಸ್ವಚ್ಛತೆ ಉಳಿಸಿಕೊಳ್ಳಬೇಕು. ನಿರ್ವಹಣೆಗೆ ಇಷ್ಟೊಂದು ಹಣ ಖರ್ಚು ಮಾಡುವಾಗ ಈ ಬಗ್ಗೆ ನಿಗಾ ಇಡಬೇಕು ಎಂದು ಶಿಕ್ಷಣ ಮಂಡಳಿ ಸದಸ್ಯರಾಗಿರುವ ವಿಧಾನ ಪರಿಷತ್‌ ಸದಸ್ಯ ಸಿ.ಎನ್.ಮಂಜೇಗೌಡ ಸಲಹೆ ನೀಡಿದರು.

ಸಭೆ ತೀರ್ಮಾನಗಳು:

key words: MYSORE UNIVERSITY, Rs 80.35 crore, in the current year, Deficit budget

Tags :
Deficit budgetin the current yearMysore UniversityRs 80.35 crore
Next Article